ಕಲ್ಯಾಣಿ ಚಾಲುಕ್ಯರು

 ಕಲ್ಯಾಣಿ ಚಾಲುಕ್ಯರು


 • ಇವರು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊಣೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು
 • ಇವರನ್ನು ಪಶ್ಚಿಮದ ಚಾಲುಕ್ಯರೆಂದು ಕರೆಯುವರು
 • ಇವರ ಪ್ರಾರಂಭದ ರಾಜಧಾನಿ - ಏತಗಿರಿ ಅಥವಾ ಪೊಟ್ಟಳಕೆರೆ ಹಾಗೂ ಮಹಾರಾಷ್ಟ್ರದ ಮಾನ್ಯಖೇಟ
 • ಇವರ ಲಾಂಛನ - ವರಾಹ
 • ರಾಷ್ಟ್ರಕೂಟರ ಸಾಮಂತರಾಗಿದ್ದ ಎರನೇ ತೈಲಪ - ಈ ಮನೆತನದ ಮೂಲ ಪುರುಷ
 • ತೈಲಪ ಎರಡನೇ ಕರ್ಕನನ್ನ ಸೋಲಿಸಿ ಈ ರಜ್ಯಾಕ್ಕೆ ತಳಹದಿ ಹಾಕಿದನು

ಆಧಾರಗಳು
 • ರನ್ನನ ಅಜಿತನಾಥಪುರಾಣ ಮತ್ತು ಗದಾಯುದ್ಧ
 • ಮೂರನೇ ಸೋಮೇಶ್ವರನ - ಮಾನಸೋಲ್ಲಾಸ
 • ಬಿಲ್ಹಣನ - ವಿಕ್ರಮಾಂಕದೇವ ಚರಿತಾ
 • ವಿಜ್ಞಾನೇಶ್ವರನ - ಮಿತಾಕ್ಷರ

ರಾಜಕೀಯ ಇತಿಹಾಸ
 • ಎರಡನೇ ತೈಲಪ
 • ಕಲ್ಯಾಣಿ ಚಾಲುಕ್ಯರ ಸ್ಥಾಪಕ ದೊರೆ
 • ಮಾನ್ಯಖೇಟ ಈತನ ರಾಜಧಾನಿ
 • ಕ್ರಿ.ಶ.997 ರಲ್ಲಿ ಮರಣ ಹೊಂದಿದ

ಆರನೇ ವಿಕ್ರಮಾಧಿತ್ಯ
 • ಕಲ್ಯಾಣಿ ಚಾಲುಕ್ಯರ ಅತ್ಯಂತ ಪ್ರಸಿದ್ದ ದೊರೆ
 • ಈತ 09/03/1076 ರಲ್ಲಿ “ ಚಾಲುಕ್ಯ ವಿಕ್ರಮ ಶಕೆ ” ಎಂಬ ಹೊಸ ಶಕೆಯನ್ನ ಸ್ಥಾಪಿಸಿದ
 • ಈತನಿಗೆ ಭವನೈಕ್ಯಮಲ್ಲ ಮತ್ತು ಪೆರ್ಮಾಚಿದೇವ ಎಂಬ ಬಿರುದಿತ್ತು
 • ಈತನ ದಂಡ ನಾಯಕನ ಹೆಸರು - ಅಚ್ಚುಗಿ
 • ಕರ್ನಾಟಕ ಸರಸ್ವತಿ ಎಂದು ಪ್ರಸಿದ್ದರಾದವರು - ಚಂದ್ರಲಾದೇವಿ
 • ಬಳ್ಳಿಗಾಂವೆ ಈತನ ಕಾಲದ ಪ್ರಸಿದ್ದ ವಿಧ್ಯಾ ಕೇಂದ್ರ
 • ಈತ “ವಿಕ್ರಮ ಪುರ ” ಎಂಬ ನಗರವನ್ನು ನಿರ್ಮಿಸಿದ ನು
 • “ದೇವಾಲಯಗಳ ಚಕ್ರವರ್ತಿ ” ಎಂದು ಕರೆಯಲಾಗಿರುವ ದೇವಾಲಯ “ ಇಟಗಿಯ ಮಹಾದೇವಾ ದೇವಾಲಯ ” .
 • “ ಇಟಗಿಯ ಮಹಾದೇವಾ ದೇವಾಲಯ ” ಇದರ ನಿರ್ಮಾತೃ ಈತನ ದಂಡ ನಾಯಕ - ಮಹಾದೇವಾ ( ದಂಡಾದೀಶ )
 • ಈತ ಕ್ರಿ.ಶ.1026 ರಲ್ಲಿ ಮರಣ ಹೊಂದಿದನು

ಮೂರನೇ ಸೋಮೇಶ್ವರ :-
 • 6 ನೇ ವಿಕ್ರಮಾಧಿತ್ಯನ ನಂತರ ಅಧಿಕಾರಕ್ಕೆ ಬಂದನು
 • ಮಾನಸೋಲ್ಲಾಸ ಮತ್ತು ವಿಕ್ರಮಾಭ್ಯುದಯ ಈತನ ಕೃತಿಗಳು
 • ಮಾನಸೋಲ್ಲಾಸದ ಇನ್ನೊಂದು ಹೆಸರು - “ಅಭಿಲಾಷಿತಾರ್ಥ ಚಿಂತಾಮಣಿ ”
 • “ಅಭಿಲಾಷಿತಾರ್ಥ ಚಿಂತಾಮಣಿ ” ಇದರ ಪ್ರತಿಯನ್ನು ಮೂರು ಭಾಗಗಳಾಗಿ ಪ್ರಕಟಿಸಿದ ಸಂಸ್ಥೆಯ ಹೆಸರು “ ಬರೋಡದ ಗಾಯಕವಾಡ್ ಓರಿಯಂಟಲ್ ಸಂಸ್ಥೆ ”
 • ಈತನ ಬಿರುದ - “ಸರ್ವಜ್ಞ ಚಕ್ರವರ್ತಿ ”
 • ಈತನ ಇತರೆ ಬಿರುದುಗಳು - ಭೂಲೋಕಮಲ್ಲ , ತ್ರಿಭುವನ ಮಲ್ಲ
ಕಲ್ಯಾಣಿ ಚಾಲುಕ್ಯರ ಆಡಳಿತ
 • ಮಂತ್ರಿಗಳ ವಿಧಗಳು - “ ಪ್ರಧಾನ ” ಮತ್ತು “ ಮಹಾಪ್ರಧಾನ ”
 • ಪ್ರಧಾನ ಮಂತ್ರಿಗೆ ಇರುತ್ತಿದ್ದ ಬಿರುದುಗಳು “ ಚೂಡಾಮಣಿ ” ಮತ್ತು “ ಅಮಾತ್ಯ ಕೇಸರಿ ”
 • ಸ್ಥಳೀಯ ಆಡಳಿತ ವರ್ಗಗಳು - ಗ್ರಾಮ ಮಹತ್ತರು ಮತ್ತು ರಾಷ್ಠ್ರ ಮಹತ್ತರರು
 • ಆಡಳಿತದ ಕೊನೆಯ ಘಟಕ - ಗ್ರಾಮ
 • ಗ್ರಾಮದ ಹಿರಿಯ ಬ್ರಾಹ್ಮಣರನ್ನು “ ಮಹಾಜನ ” ಎಂದು ಕರೆಯುತ್ತಿದ್ದರು .
 • ವೈಶ್ಯರನ್ನು - ನಬರ ಎಂದು ಕರೆಯುತ್ತಿದ್ದರು
 • ಇವರ ಆಡಳಿತದಲ್ಲಿದ್ದ ಭೂಕಂದಾಯ ಲೆಕ್ಕವಿಡುತ್ತಿದ್ದ ಮುಖ್ಯಸ್ಥನ ಹೆಸರು - ಕಡಿತವರ್ಗಡೆ
 • ಸೈನ್ಯದ ಪ್ರಮುಖ ಕೇಂದ್ರ ಕೋಟೆಗಳು
 • ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ - ಶಕ್ತಿ ಪೂಜೆಯ ಕೇಂದ್ರವಾಗಿತ್ತು
 • ರನ್ನನಿಗೆ ಆಶ್ರಯ ನೀಡಿದವರು - ಸತ್ಯಶ್ರಾಯ ಹಾಗೂ 2 ನೇ ತೈಲಪ
 • ಇವರ ಕಾಲದಲ್ಲಿದ್ದ ಸುಪ್ರಸಿದ್ದ ಜೈನ ಭಕ್ತೆ - ಅತ್ತಿಮಬ್ಬೆ
 • ಅತ್ತಿಮಬ್ಬೆಗೆ ಇದ್ದ ಬಿರುದು - ದಾನ ಚಿಂತಾಮಣಿ
 • ಬಳ್ಳಿಗಾಂವೆ , ಕೋಳಿವಾಡ ಮತ್ತು ಡಂಬಳ - ಮಹಾಯಾನ ಬೌಧ್ಧರ ಕೇಂದ್ರ

ಸಾಹಿತ್ಯ ( ಕನ್ನಡ )
 • ರನ್ನ - ಗದಾಯುದ್ಧ ಮತ್ತು ಅಜಿತನಾಥಪುರಾಣ ( ಕವಿಚಕ್ರವರ್ತಿ ಬಿರುದು )
 • ಎರಡನೇ ಚಾವುಂಡರಾಯ - ಲೋಕೋಪಕಾರ
 • ನಾಗವರ್ಮ - ಕರ್ನಾಟಕ ಕದಂಬರಿ ಮತ್ತು ಛಂದೋಬದಿ
 • ಚಂದ್ರರಾಜ - ಮದನ ತಿಲಕ
 • ಶ್ರೀಧರಚಾರ್ಯ - ಜಾತಕ ತಿಲಕ
 • ಕೀರ್ತಿವರ್ಮ - ಗೋವೈದ್ಯ
 • ಶಾಂತಿನಾಥ - ಸುಕುಮಾರ ಚರಿತ್ರೆ
 • ಮಾದವರ್ಮಾಚಾರ್ಯ - ಚಂದ್ರ ಚೂಡ ಮಣಿ
 • ನಯನ ಸೇನ - ಧರ್ಮಾಮೃತ
 • ದುರ್ಗಸಿಂಹ - ಪಂಚತಂತ್ರ
 • ಸಂಸ್ಕೃತ ಸಾಹಿತ್ಯ
 • ಜಗದೇಕ ಮಲ್ಲನ ಆಸ್ಥಾನ ಕವಿ - ವಾದಿರಾಜ
 • 6 ನೇ ವಿಕ್ರಮಾಧಿತ್ಯನ ಅಶ್ರಿತ ಕವಿ - ಬಿಲ್ಹಣ
 • ವಾದಿರಾಜ - ಯಶೋಧರ ಚರಿತೆ ಮತ್ತು ಪಾರ್ಶ್ವನಾಥ ಚರಿತೆ
 • ಬಿಲ್ಹಣ - ವಿಕ್ರಮಾಂಕ ದೇವಚರಿತ
 • ವಿಜ್ಞಾನೇಶ್ವರ - ಮಿತಾಕ್ಷರ ಸಂಹಿತೆ
 • ಮೂರನೇ ಸೋಮೇಶ್ವರ - ಮಾನಸೋಲ್ಲಾಸ
 • ಜಗದೇಕ ಮಲ್ಲನ - ಸಂಗೀತ ಚೂಡಾಮಣಿ

Extra Tips
 • ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬೀದರ್ ಜಿಲ್ಲೆಯ ಕಲ್ಯಾಣ
 • ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿದ ಕವಿ - ರನ್ನ
 • ಕನ್ನೇಗಾಲ ಕದನ ಸಂಭವಿಸಿದ್ದು - 6ನೇ ವಿಕ್ರಮಾಧಿತ್ಯ / ವಿಷ್ಣುವರ್ಧನ
 • ನೃತ್ಯವಿಧ್ಯಾದರಿ ಎಂಬ ಬಿರುದನ್ನು ಹೊಂದಿದ್ದವಳು - ಚಂದ್ರಲಾದೇವಿ
 • ಕನ್ನಡದ ಮೊದಲ ಪಶುವೈಧ್ಯ ಕೃತಿ - ಗೋವೈದ್ಯ ( ಕೀರ್ತಿವರ್ಮ )
 • ಕನ್ನಡದ ಮೊದಲ ಜೋತಿಷ್ಯ ಶಾಸ್ತ್ರ - ಜಾತಕ ತಿಲಕ ( ಶ್ರೀಧರಚಾರ್ಯ )
 • 3 ನೇ ಸೋಮೇಶ್ವರ ನ ಬಿರುದು - ಭೂಲೋಕಮಲ್ಲ , ಸರ್ವಜ್ಞ ಚಕ್ರವರ್ತಿ ಹಾಗೂ ಸರ್ವಜ್ಞ ಭೂಪ
 • ಅಭಿನವ ಪಂಪ ಎಂದು ಖ್ಯಾತಿವೆತ್ತವರು - ನಾಗಚಂದ್ರಕವಿ
 • ಕನ್ನಡದ ಪ್ರಪ್ರಥಮ ಕವಯಿತ್ರಿ - ಕಂತಿ
 • ಅರಿಕೇಸರಿಯ ಆಸ್ಥಾನದ ಕವಿ - ಪಂಪ
 • ಸಾಹಸ ಭೀಮ ವಿಜಯ - ರನ್ನ
 • ಆದಿ ಕವಿ ಪಂಪ - ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ
 • ಪಂಪ ರಾಮಯಾಣ ಎಂದು ಖ್ಯಾತವಾದ ಕೃತಿ - ನಾಗ ಚಂದ್ರ ಕವಿಯ - ರಾಮಚರಿತಪುರಾಣ
 • ಎರಡನೇ ತೈಲಪನ ಬಿರುದು - ತ್ರೈಲೋಕ ಮಲ್ಲ
 • ಎರಡನೇ ತೈಲಪನ ದಂಡ ನಾಯಕ - ಬರ್ಫೆ
 • 6ನೇ ವಿಕ್ರಮಾಧಿತ್ಯನ ದಂಡನಾಯಕ - ದಂಡಾದೀಶ
 • ಕನ್ನಡ ಮೊದಲ ಕಾಮಸಾಸ್ತ್ರ ಗ್ರಂಥ - ಮದನ ತಿಲಕ (ಚಂದ್ರರಾಜ )
 • ರನ್ನನಿಗೆ “ಕವಿಚಕ್ರವರ್ತಿ ” ಎಂಬ ಬಿರುದು ನೀಡಿದವರು - 2 ನೇ ತೈಲಪ
 • ಕಲ್ಯಾಣಿ ಚಾಲುಕ್ಯರ ಕೊನೆಯ ದೊರೆ - 3 ನೇ ತೈಲಪ
 • ಕಲ್ಯಾಣಿ ಚಾಲುಕ್ಯರ ಆಳ್ವಿಕೆಯನ್ನು ಕೊನೆಗಾಣಿಸಿದವರು - ಕಲಚೂರಿ ಬಿಜ್ಜಳ
 • ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬಿದರ್ ಜಿಲ್ಲೆಯ ಬಸವನ ಕಲ್ಯಾಣ
 • 6 ನೇ ವಿಕ್ರಮಾಧಿತ್ಯನ ತಂದೆ ತಾಯಿ - 1 ನೇ ಸೋಮೇಶ್ವರ ಹಾಗೂ ಬಾಚಲಾ ದೇವಿ