Skip to main content
ಮಹಿಳಾ ಬ್ಯಾಂಕಗಳು
ಮಹಿಳೆಯರಿಂದ ಮಹಿಳೆಯರಿಗಾಗಿ ಎಂಬ ಕಲ್ಪನೆಯೊಂದಿಗೆ ಹುಟ್ಟಿಕೊಂಡಿರುವ ಬ್ಯಾಂಕುಗಳೇ ಮಹಿಳಾ ಬ್ಯಾಂಕಗಳು ವಿಶ್ವದ ಮೊದಲ ಮಹಿಳಾ ಬ್ಯಾಂಕ ಸ್ಥಾಪಿಸಿದ ರಾಷ್ಟ್ರ ಪಾಕಿಸ್ತಾನ. ಮೊದಲ ಮಹಿಳಾ ಬ್ಯಾಂಕ್ ನಿ, ಪಾಕಿಸ್ತಾನ (First Women Bank Limited) ಇದು 1989 ರಲ್ಲಿ ಕರಾಚಿಯಲ್ಲಿ ಸ್ಥಾಪಿಸಲಾಯಿತು. ಮಹಿಳೆಯರಿಗಾಗಿ ಬ್ಯಾಂಕ್ ಸ್ಥಾಪಿಸಿದ ವಿಶ್ವದ ಎರಡನೇ ರಾಷ್ಟ್ರ ತಾಂಜೆನಿಯಾ ತಾಂಜೆನಿಯಾ ಮಹಿಳಾ ಬ್ಯಾಂಕ್ ನಿ. (Tanzania Women's Bank Limited) ಇದು 2007 ಸ್ಥಾಪಿಸಲಾಯಿತು. ಮಹಿಳೆಯರಿಗಾಗಿ ಬ್ಯಾಂಕ್ ಸ್ಥಾಪಿಸಿದ ರಾಷ್ಟ್ರಗಳಲ್ಲಿ ಭಾರತ ಮೂರನೇಯ ದೇಶ. ಭಾರತೀಯ ಮಹಿಳಾ ಬ್ಯಾಂಕ್ ಅನ್ನು 2013 ರಲ್ಲಿ ಸ್ಥಾಪಿಸಲಾಯಿತು. ನವೆಂಬರ್ 19.2013 ರಂದು ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 94 ಜನ್ಮ ದಿನಾಚರಣೆ ಸವಿನೆನಪಿನಲ್ಲಿ ದೆಹಲಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರವರು ಉದ್ಘಾಟಿಸಿದರು.ಭಾರತೀಯ ಮಹಿಳಾ ಬ್ಯಾಂಕ್ ಮೊದಲ ಹಾಗೂ ಸದ್ಯದ ಅಧ್ಯಕ್ಷರು ವ್ಯವಸ್ಥಾಪಕ ನಿರ್ದೇಶಕರು ಉಷಾ ಅನಂತ ಸುಬ್ರಮಣ್ಯಂಭಾರತೀಯ ಮಹಿಳಾ ಬ್ಯಾಂಕ್ ಬೆಂಗಳೂರು ಸೇರಿದಂತೆ ದೇಶದಲ್ಲೆಡೆ 7 ಶಾಖೆಗಳನ್ನು ತೆರೆದಿದೆ.