ವೈದ್ಯ ಸುಭಾಷ ಮುಖ್ಯೋಪಾಧ್ಯಾಯ.
- ಡಾ|| ಸುಭಾಷ ಮುಖ್ಯೋಪಾಧ್ಯಾಯ ಒಬ್ಬ ಭಾರತೀಯ ವೈದ್ಯ, ಜನಿಸಿದ್ದು 1931 ಜನೆವರಿ 16 ರಂದು ಬಿಹಾರದ ಹಜಾರಿಬಾಗ್ ನಲ್ಲಿ(ಇದಿ ಈಗ ಜಾರ್ಖಂಡ್ ನಲ್ಲಿದೆ), ಡಾ|| ಸುಭಾಷ ಮುಖ್ಯೋಪಾಧ್ಯಾಯ ಅವರೊಬ್ಬ ಕೊಂಡಾಡದ ನಾಯಕ, ತಮ್ಮ ಸಾಧನೆಗಳಿಗೆ ಮನ್ನಣೆ ಸಿಗದುದ್ದಕ್ಕಾಗಿ 1981 ರಂದು ಜೂನ್ 19ರಂದು ಕಲ್ಕತ್ತದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಶರಣಾದರು.
- ಡಾ|| ಸುಭಾಷ ಮುಖ್ಯೋಪಾಧ್ಯಾಯ ವಿಶ್ವದ ಎರಡನೇ ಹಾಗೂ ಭಾರತದ(ಏಷ್ಯಾದ) ಪ್ರಥಮ ಪ್ರನಾಳ ಶಿಶುವಿನ ನಿರ್ಮಾತೃ, ಪ್ರನಾಳ ಶಿಶುವಿನ ತಯಾರಿಕೆಯನ್ನು ಅತ್ಯಂತ ಸರಳ ಹಾಗೂ ಯಶಸ್ವಿ ವಿಧಾನವನ್ನು ಅವರು ಕಂಡು ಹಿಡಿದಿದ್ದರು.
- ಭಾರತದ ಪ್ರಥಮ ಪ್ರನಾಳ ಶಿಶು "ದುರ್ಗಾ ಅಲಿಯಾಸ್ ಕನುಪ್ರಿಯಾ ಅಗರ್ ವಾಲ್" ರನ್ನು ಸಂಶೋಧಿಸಿದ ಪ್ರಥಮ ವ್ಯಕ್ತಿ ಅವರು, ದುರ್ಗಾ ಜನಿಸಿದ್ದು ಅಕ್ಟೋಬರ್ 3 1978 ರಂದು, ವಿಶ್ವದ ಪ್ರಥಮ ಪ್ರನಾಳ ಶಿಶು ಲೂಯಿಸ್ ಬ್ರೌನ್ ಜನಿಸಿದ್ದು 25 ಜುಲೈ 1978 ರಂದು, ಅಂದರೆ ಲೂಯಿಸ್ ಬ್ರೌನ್ ದಿನಗಳ ನಂತರ ದುರ್ಗಾ ಜನಿಸಿದ್ದು.
- ತಮ್ಮ ಜೀವಿತಾವಧಿಯಲ್ಲಿ ಸಮಾಜ ಶಾಹಿಯ ನಿರ್ಲಕ್ಷ್ಯ, ಅವಮಾನ ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ಕಿರುಕಳ ಇವುಗಳಿಂದ ಅವರು ಬೇಸತ್ತು ಹೋಗಿದ್ದರು, ತಮ್ಮ ಜೀವಮಾನದಲ್ಲಿ ತಮ್ಮ ಸಾಧನೆಗಳಿಗೆ ಮನ್ನಣೆ ಸಿಗಲಿಲ್ಲ ಅನ್ನುವ ಕಾರಣಕ್ಕಾಗಿ ಅವರು ಆತ್ಮಹತ್ಯೆಗೆ ಶರಣಾದರು. ಅಲ್ಲದೇ ಪಶ್ಚಿಮ ಬಂಗಾಳದ ಸರ್ಕಾರ ಅವರನ್ನು ತುಂಬಾ ಶೋಚನಿಯವಾಗಿ ನಡೆಸಿಕ್ಕೊಂಡಿತು, ಅವರನ್ನು ಅಂತರಾಷ್ಟೀಯ ಸಮ್ಮೇಳನಗಳಿಗೆ ಹಾಜರಾಗಲೂ ಅನುಮತಿ ನಿರಾಕರಿಸಿತು, ಅಲ್ಲದೇ ತಮ್ಮ ವಿಚಾರಗಳನ್ನು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಹಂಚಿಕ್ಕೋಳ್ಳಲು ನಿರ್ಭಂದ ಹೇರಿತ್ತು.
- ಡಾ|| ಸುಭಾಷ ಮುಖ್ಯೋಪಾಧ್ಯಾಯ ಅವರು ಇಂಗ್ಲೆಂಡಿನ ವಿಜ್ಞಾನಿಗಳಾದ ಪೆಟ್ರಿಕ್ ಸ್ಟೆಪ್ಟ ಮತ್ತು ರಾಬರ್ಟ್ ಎಡ್ವರ್ಡ್ ಜೊತೆ ಕೆಲಸ ಮಾಡಿ ವಿಶ್ವದ ಪ್ರಥಮ ಪ್ರನಾಳ ಶಿಶುವಿನ ಉದಯಕ್ಕೂ ಕಾರಣರಾಗಿದ್ದಾರೆ,
- ಇವರ ಸಾಧನೆಗಳನ್ನು ಸಮಾಜ ಹಾಗೂ ಸರ್ಕಾರ ಗುರುತಿಸದ್ದಕ್ಕಾಗಿ ಅವರು ಆತ್ಮಹತ್ಯೆಗೆ ಶರಣಾದರೂ, ಅದ್ಯಾಗೂ ICMR(INDIAN COUNCIL FOR MEDICAL RESEARCH) ಅವರ ಸಾಧನೆಯನ್ನು ಅವರು ಆತ್ಮಹತ್ಯೆ ಮಾಡಿಕೊಂಡ 21 ವರ್ಷಗಳ ನಂತರ 2002 ರಲ್ಲಿ ಗುರುತಿಸಿತು,
- ಡಾ|| ಸುಭಾಷ ಮುಖ್ಯೋಪಾಧ್ಯಾಯ ರವರ ಜೀವನ ಪ್ರೇರಿತ ಒಂದು ಚಲನಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಹೆಸರು "ಏಕ್ ಡಾಕ್ಟರ್ ಕೀ ಮೌತ್ " ಇದು 1990 ರಲ್ಲಿ ಬಿಡುಗಡೆಯಾಯಿತು, ಇದನ್ನು ತಪ್ಹನ್ ಸಿನ್ಹಾರವರು ನಿರ್ದೇಶಿಸಿದ್ದಾರೆ.