ಸಂವಿಧಾನ ಸಮರ್ಪಣಾ ದಿನ

 

  • ನವೆಂಬರ್ 26 1949, ರಂದು ಸಂವಿಧಾನ ರಚನಾ ಕಾರ್ಯ ಪೂರ್ಣಗೊಂಡು ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಲಾಯಿತು. ಆದರೆ ಸಂವಿಧಾನ ವಿಧಿವತ್ತಾಗಿ ಜಾರಿಗೆ ಬಂದಿದ್ದು ಜನೆವರಿ 26,1950 ರಂದು. ಸಂವಿಧಾನ ದೇಶಕ್ಕೆ ಸಮರ್ಪಿಸಿ ಇಂದಿಗೆ 65 ವರ್ಷಗಳು ಸಂದಿವೆ.
  • ಸಂವಿಧಾನ ರಚನಾ ಕಾರ್ಯ 1949 ನವೆಂಬರ್ 26 ಕ್ಕೆ ಪೂರ್ಣಗೊಂಡರು ಸಹ ಅದನ್ನು 1950 ಜನೆವರಿ 26, ರಂದು ಜಾರಿಗೆ ತರಲು ಒಂದು ಪ್ರಮುಖ ಕಾರಣವೆನೆಂದರೆ, 1930 ರ ಕಾಂಗ್ರೆಸ್ಸ್ ಅಧಿವೇಶನ ಲಾಹೋರಿನಲ್ಲಿ ಜರುಗಿತು. ಇದರ ಅಧ್ಯಕ್ಷತೆಯನ್ನು ಜವಾಹರಲಾಲ್ ನೆಹರೂರವರು ವಹಿಸಿಕೊಂಡಿದ್ದರು. ಈ ಲಾಹೋರಿನ ಅಧಿವೇಶನದಲ್ಲಿ ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ(ಪೂರ್ಣ ಸ್ವರಾಜ್ಯ) ಪಡೆಯುವ ನಿರ್ಧಾರ ಕೈಗೊಳ್ಳಲಾಯಿತು ಹಾಗೆಯೇ ಜನೆವರಿ 26 ರಂದು ಸ್ವತಂತ್ರ ದಿನವನ್ನಾಗಿ ಆಚರಿಲಾಯಿತು.ಲಾಹೋರಿನ ರಾವಿ ನದಿ ದಂಡೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಆ ಕಾರಣಕ್ಕಾಗಿಯೇ ಸಂವಿಧಾನವನ್ನು 26 ಜನೆವರಿಯಂದು ಜಾರಿಗೆ ತರಲಾಯಿತು, ಅಲ್ಲದೇ ಆ ಕಾರಣಕ್ಕಾಗಿಯೇ ದೇಶದಾದ್ಯಂತ 26 ಜನೆವರಿಯನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.